ಅಗ್ನಿನಿರ್ವಾಪ ಆದೇಶ

 ಸಾಮಾನ್ಯವಾಗಿ ಬೇಸಗೆಯಲ್ಲಿ ಸಂಜೆಯಾಗುತ್ತಲೂ ಚಳಿಗಾಲದಲ್ಲಿ ರಾತ್ರಿ 8 ಗಂಟೆಗೆ ಸರಿಯಾಗಿ ಎಲ್ಲರೂ ಬೆಂಕಿ ಹಾಗೂ ದೀಪವನ್ನು ನಂದಿಸಬೇಕೆಂದು ಕಟ್ಟಳೆ ವಿಧಿಸುತ್ತಿದ್ದ ಪೂರ್ವಕಾಲದ ಕಾನೂನು (ಕಫ್ರ್ಯೂ). ನಂದಿಸುವುದಕ್ಕೆ ಸೂಚನೆ ಕೊಡಲು ಗಂಟೆ ಬಾರಿಸುತ್ತಿದ್ದರು. ಈ ಪದ್ಧತಿ ಮೊದಲು ಯೂರೋಪಿನಲ್ಲಿ ಬಳಕೆಯಲ್ಲಿದ್ದು ಅನಂತರ ವಿಲಿಯಂ ದಿ ಕಾಂಕರರ್ ಎಂಬ ಅಂದಿನ ಇಂಗ್ಲೆಂಡಿನ ದೊರೆ ಈ ಬಗ್ಗೆ ಒಂದು ಆಜ್ಞೆ ಹೊರಡಿಸಿದ್ದ. ಇದಕ್ಕೆ ಮೊದಲೇ ಈ ರೀತಿಯ ಪದ್ಧತಿ ಇಂಗ್ಲೆಂಡಿನ ಒಂದನೇ ಹೆನ್ರಿ ತನ್ನ ತಂದೆ ಈ ವಿಷಯದಲ್ಲಿ ಮಾಡಿದ ಶಾಸನವನ್ನು 1101ರಲ್ಲಿ ರದ್ದುಮಾಡಿದನೆಂದು ತಿಳಿದು ಬಂದಿದೆ. ಇಂದಿಗೂ ಹಲವೆಡೆ ಜಾರಿಯಲ್ಲಿರುವ ಈ ಪದ್ಧತಿಯ ಉದ್ದೇಶ ಬೆಂಕಿಯಿಂದ ಉಂಟಾಗುವ ಅಪಘಾತಗಳನ್ನು ತಪ್ಪಿಸುವುದೇ ಹೊರತು, ಕರಾಳಶಾಸನದಿಂದ ಜನರನ್ನು ಹಿಂಸಿಸುವುದಲ್ಲ. ಈಗಲೂ ಇಂಗ್ಲೆಂಡಿನಲ್ಲಿ ಲಿಂಕನ್ಸ್ ಇನ್ ಎಂಬ ಸ್ಥಳದಲ್ಲೂ ಅಮೆರಿಕದ ಬಹುಭಾಗದಲ್ಲೂ (ಉದಾ: ಯೂಟಾ) ಇದು ಜಾರಿಯಲ್ಲಿದೆ.         

(ಕೆ.ವಿ.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ